ತಾಳ್ಮೆ, ತ್ಯಾಗ, ಸಹಕಾರ ಕ್ರೀಡೆಯ ಪ್ರಮುಖ ಅಂಗ: ಡಾ. ಗಜಾನನ ಪ್ರಭು
ಕೋಟೇಶ್ವರ : ತಾಳ್ಮೆ, ತ್ಯಾಗ, ಸಹಕಾರ ಕ್ರೀಡೆಯ ಪ್ರಮುಖ ಅಂಗವಾಗಿದೆ. ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಕ್ರೀಡೆಯು ಹೇತುವಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಗಜಾನನ ಪ್ರಭು ಬಿ. ಹೇಳಿದರು.

ಇಲ್ಲಿನ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ನಡೆದ 21ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾ ಜ್ಯೋತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯು ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದಲ್ಲದೆ, ಮಾನಸಿಕವಾಗಿಯೂ ಸುದೃಢರಾಗಲು ಸಾಧ್ಯವಾಗುತ್ತದೆ. ತಾಳ್ಮೆ, ತ್ಯಾಗ, ಸಹಕಾರ ಕ್ರೀಡೆಯ ಪ್ರಮುಖ ಅಂಗವಾಗಿದ್ದು, ಕ್ರೀಡಾಕೂಟದಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸೋಲಿಗೆ ಕುಗ್ಗದೆ, ಗೆಲುವಿಗೆ ಅಹಂಕಾರ ಪಡದೆ ಕ್ರೀಡಾ ಸ್ಫೂರ್ತಿಯಿಂದ ಮುನ್ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಎನ್.ಸಿ.ಸಿ. ಕೆಡೆಟ್ಗಳ ಪಥ ಸಂಚಲನ, ಏರೋಬಿಕ್ಸ್, ಕರಾಟೆ ಪ್ರದರ್ಶನವನ್ನು ಮೆಚ್ಚಿ ಶ್ಲಾಘಿಸಿದರು.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಅನುಪಮ ಎಸ್. ಶೆಟ್ಟಿ ಉಪಸ್ಥಿತಿಯಲ್ಲಿದ್ದರು.


ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ ನಾಯ್ಕ್, ಗುರುಕುಲ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲೆ ಡಾ. ರೂಪಾ ಶೆಣೈ ಸ್ವಾಗತಿಸಿದರು.
ಕೀರ್ತಿ ಶೆಟ್ಟಿ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರ್ವಹಿಸಿದರು. ಬಬಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸುಷ್ಮಾ ವಂದಿಸಿದರು.





